ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯುವ ಸಾಧಕ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ “ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ”ಪ್ರದಾನ
ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದಾತ್ತ ಚಿಂತನೆಯನ್ನು ತನ್ನಲ್ಲಿ ಅಳವಡಿಸಿಕೊಂಡು ಸಣ್ಣ ಪ್ರಾಯದಲ್ಲಿ ಗುರುವಾಯನಕೆರೆ ಪ್ರದೇಶದಲ್ಲಿ ಎಕ್ಸೆಲ್ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳಸಿ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಎಕ್ಸೆಲ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ವಿಜಯವಾಣಿ ದಿನಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು
ಜೂನ್ 20 ರಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಸಾಧನೆಯಲ್ಲಿ ದೇಶ ಕಂಡ ಅಪ್ರತಿಮ ಸಾದಕ ಡಾ.ವಿಜಯ ಸಂಕೇಶ್ವರ್ ರವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳು ವೈದ್ಯರಾಗಬೇಕು,ಇಂಜಿನಿಯರ್ ಆಗಬೇಕು ಎನ್ನುವ ಕನಸು ಕಟ್ಟೋದು ಸಹಜ.ಆದರೆ ದೇಶದ ಉತ್ತಮ ವೈದ್ಯರಾಗಬೇಕು,ಉತ್ತಮ ಇಂಜಿನಿಯರಿಂಗ್ ಆಗಬೇಕು ಎನ್ನುವ ಕನಸು ಕಂಡವರು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅದ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು.ಇವರ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಸಮ್ಮಾನಗಳು ದೊರೆಕಿದೆ.
ಸುಮಂತ್ ಕುಮಾರ್ ಜೈನ್ ಅವರು ಪ್ರಶಸ್ತಿಯನ್ನು ತಂದೆ ಸತೀಶ್ ಕುಮಾರ್,ತಾಯಿ ಶುಭಲತಾ ಅವರೊಂದಿಗೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಎಸ್ ಚೆಲುವರಾಯ ಸ್ವಾಮಿ,ಸಂಸದ ಪಿ.ಸಿ ಮೋಹನ್,ಎಡಿಜಿಪಿ ಡಿ.ರೂಪಾ,ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ ಉಪಸ್ಥಿತರಿದ್ದರು.ಎಕ್ಸೆಲ್ ಕಾಲೇಜಿನ ರಿತೇಶ್ ಹಾಗೂ ಪದ್ಮಪ್ರಸಾದ್ ಜೊತೆಗಿದ್ದರು.