Rakshaka Namana

ಎಕ್ಸೆಲ್‌ ಎಕ್ಸೆಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಗುರುವಾಯನಕೆರೆ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಭಾರತೀಯ ಸೇನೆ ಹಾಗೂ ಆರಕ್ಷಕ ವಿಭಾಗಗಳಲ್ಲಿ ರಾಷ್ಟ್ರ ಸೇವೆಗೈಯ್ಯುವ ಎಕ್ಸೆಲ್‌ ವಿದ್ಯಾರ್ಥಿಗಳ ಪಾಲಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಅರಮಲೆ ಬೆಟ್ಟ ಕ್ಯಾಂಪಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕುಮಾರ ಚಂದ್ರ, ಪೊಲೀಸ್ ಅಧೀಕ್ಷಕರು, ಲೋಕಾಯುಕ್ತ, ಉತ್ತರ ಕನ್ನಡ ಜಿಲ್ಲೆ, ಸಿಕಂದರ ಪಾಷ, ಉಪಠಾಣಾಧಿಕಾರಿಗಳು , ಬೆಳ್ತಂಗಡಿ, ಮಹಮ್ಮದ್‌ ರಫಿ, ಅಧ್ಯಕ್ಷರು, ಮಾಜಿ ಸೈನಿಕರ ಸಂಘ, ಬೆಳ್ತಂಗಡಿ ಇವರು ಆಗಮಿಸಿದ್ದರು. ನೆರೆದ ಸಹಸ್ರ ಮಂದಿಯ ಮುಂದೆ ಸುಮಾರು 150 ಕ್ಕೂ ಅಧಿಕ ಮಂದಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಶ್ರೀ ಸುಮಂತ್ ಕುಮಾರ್ ಜೈನ್, ಎಕ್ಸೆಲ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಕಜೆ, ಡಾ. ನವೀನ್ ಕುಮಾರ್ ಮರಿಕೆ, ಎಕ್ಸೆಲ್‌ ಟೆಕ್ನೋ ಸ್ಕೂಲ್‌ನ ಪ್ರಾಂಶುಪಾಲರಾದ ಶಾಂತಿರಾಜ್‌ ಜೈನ್‌ ಮತ್ತು ಶ್ರೀಮತಿ ಸುಮಿತ್ರಾ ಗೌಡ ಸೇರಿದಂತೆ ಕಾಲೇಜಿನ ಭೋಧಕ ಬೋಧಕೇತರ ವೃಂದ, ಸಾವಿರಾರು ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಭಾಗಿಯಾದರು.